ಭಾರತೀಯ ಸಶಸ್ತ್ರ ದಳದ ಅತಿ ದೊಡ್ಡ ವಿಭಾಗವಾಗಿರುವ ಭಾರತೀಯ ಭೂಸೇನೆಯು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ರಾಷ್ಟ್ರೀಯ ಭದ್ರತೆ, ಬಾಹ್ಯ ಆಕ್ರಮಣ ಹಾಗೂ ಅಪಾಯಗಳಿಂದ ಭಾರತದ ರಕ್ಷಣೆ ಹಾಗೂ ತನ್ನ ಸರಹದ್ದಿನ ಒಳಗೆ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ. ಇಬ್ಬರು ಅಧಿಕಾರಿಗಳಿಗೆ ಪಂಚತಾರಾ ದರ್ಜೆಯಾದ ಫೀಲ್ಡ್ ಮಾರ್ಷಲ್ ದರ್ಜೆಯನ್ನು ಪ್ರದಾನ ಮಾಡಲಾಗಿದೆ, ಇದೊಂದು ಶ್ರೇಷ್ಠ ಗೌರವದ ವಿಧ್ಯುಕ್ತ ಸ್ಥಾನವಾಗಿದೆ. == ಭೂಸೇನಾ ಮುಖ್ಯಸ್ತರು == 11-06-2017 ರಲ್ಲಿ ನೇಮಕ:*ಛೀಫ್ ಜೆನರಲ್ ಬಿಪಿಲ್ ರಾವತ್; ದಿ. 30-12-2019 ರಂದು ಹೊಸದಾಗಿ ರಚನೆಯಾಗಿರುವ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್- ,) ಹುದ್ದೆಗೆ ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಲಾಗಿದೆ. ಅವರು ಹಾಲಿ ನಿರ್ವಹಿಸುತ್ತಿರುವ ಭೂ ಸೇನಾ ಮುಖ್ಯಸ್ಥ ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಾಗಲೇ ರಾವತ್ ಅವರನ್ನು ನೂತನ ಹುದ್ದೆಗೆ ನೇಮಕಮಾಡಲಾಗಿದೆ. ಸಿಡಿಎಸ್ ಮುಖ್ಯಸ್ಥರ ನಿವೃತ್ತಿ ವಯಸ್ಸು 65 ವರ್ಷ ಎಂದು ದಿ.29-12-2019 ರಂದು ಕೇಂದ್ರ ಸರ್ಕಾರ ಘೋಷಿಸಿತ್ತು. == ಬಿಪಿನ್‌ ರಾವತ್‌ ನೇಮಕ == 18 , 2016 ಲೆಫ್ಟಿನೆಂಟ್ ಜನರಲ್‌ ಬಿಪಿನ್‌ ರಾವತ್‌ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ. ಮತ್ತು ಏರ್‌ ಚೀಫ್‌ ಮಾರ್ಷಲ್‌ ಬಿ.ಎಸ್‌. ಧನೋವಾ ಅವರನ್ನು ವಾಯು ಪಡೆಯ (ಐಎಎಫ್‌) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ. ಸೇನಾ ಪಡೆಯ ಉಪ ಮುಖ್ಯಸ್ಥರಾಗಿರುವ ರಾವತ್‌ ಅವರು, ಇಬ್ಬರು ಹಿರಿಯ ಅಧಿಕಾರಿಗಳನ್ನು (ಅತ್ಯಂತ ಹಿರಿಯ ಸೇನಾ ಕಮಾಂಡರ್‌, ಪೂರ್ವ ಕಮಾಂಡ್‌ನ ಮುಖ್ಯಸ್ಥ ಪ್ರವೀಣ್‌ ಬಕ್ಷಿ ಮತ್ತು ದಕ್ಷಿಣ ಕಮಾಂಡ್‌ನ ಮುಖ್ಯಸ್ಥ ಪಿ.ಎಂ. ಹರಿಜ್‌) ಹಿಂದಿಕ್ಕಿ ಭೂ ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕವಾಗಿದ್ದಾರೆ. ಸೇನಾ ಪಡೆ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅಧಿಕಾರಾವಧಿ ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿದ್ದು, ರಾವತ್‌ ಅವರು ಸುಹಾಗ್‌ ಸ್ಥಾನವನ್ನು ತುಂಬಲಿದ್ದಾರೆ. === ಭೂ ಸೇನಾ ಮುಖ್ಯಸ್ಥರಾಗಿ ಮುಕುಂದ್ ನರವಣೆ ಅಧಿಕಾರ ಸ್ವೀಕಾರ === ಡಿಸೆಂಬರ್‌ 31, 2019 ನಿವೃತ್ತರಾದ ಲೆಫ್ಟಿನೆಂಟ್ ಜನರಲ್‌ ಬಿಪಿನ್‌ ರಾವತ್‌ ಅವರಿಂದ, 2019 ಡಿಸೆಂಬರ್‌ 31 ರಂದು ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ರಾವತ್‌ ಅವರಿಂದ ಮಂಗಳವಾರ ಅಧಿಕಾರ ವಹಿಸಿಕೊಂಡರು. ಪರಿಚಯ:ಮುಖ್ಯ ಸಂಗತಿಗಳು;೧೭-೧೨-೨೦೧೯ == ಸೈನ್ಯಕ್ಕೆ ಎರಡು ಎಮ್.777 ಹಾವಿಟ್ಜರ್ಗಳ ಸೇರ್ಪಡೇ == 2016 ರ ಜೂನ್ 26 ರಂದು, ಭಾರತವು 145 ಎಂ777 ಫಿರಂಗಿಗಳನ್ನು 750 ಮಿಲಿಯನ್ ಡಾಲರ್ಗೆ ಖರೀದಿಸಲಿದೆ ಎಂದು ಘೋಷಿಸಲಾಯಿತು. 2016 ರ ನವೆಂಬರ್ 30 ರಂದು ಭಾರತೀಯ ಸರ್ಕಾರವು ಯು.ಎಸ್.ನಿಂದ 145 ಹೌವಿಟ್ಜರ್ಗಳನ್ನು ಖರೀದಿಸಲು ಒಪ್ಪಂದವನ್ನು ಪೂರ್ಣಗೊಳಿಸಿತು. ಆದರೂ, ಒಪ್ಪಂದವು ಡಿಸೆಂಬರ್ 2016 ರಲ್ಲಿ ಪೂರ್ಣಗೊಂಡಿತು. ಹೀಗೆ ಒಪ್ಪಂದದ ಪ್ರಕಾರ 18 ಮೇ 2017 ರಂದು ಭಾರತೀಯ ಸೇನೆಯು ಎರಡು ಎಮ್.777 ಹಾವಿಟ್ಜರ್ಗಳ ಮೊದಲ ಬ್ಯಾಚ್ ಅನ್ನು ಪಡೆದುಕೊಂಡಿದೆ. == ನೋಡಿ == ಭಾರತ ಭಾರತೀಯ ಸೈನ್ಯ ಭಾರತೀಯ ಭೂಸೇನೆ ಭಾರತೀಯ ವಾಯುಸೇನೆ ಭಾರತೀಯ ನೌಕಾಸೇನೆ ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ 2008ರ ಮುಂಬೈ ದಾಳಿ ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಅರ್ಜುನ ಕದನ ಟ್ಯಾಂಕ್ == ಹೊರ ಸಂಪರ್ಕ == ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್) :ಅಭಿಪ್ರಾಯಗಳು;8 , 2016 [೧] 2016-10-08 ವೇಬ್ಯಾಕ್ ಮೆಷಿನ್ ನಲ್ಲಿ. ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್);ಸೇನೆಯ ಹೊಟ್ಟೆ ಗಟ್ಟಿ ಮಾಡಿ!;8 , 2016;[೨] 2016-10-08 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖ ==